ಪ್ರತಿವರ್ಷದಂತೆ ಡಾಕ್ಟರ ಕಲ್ಮಾಡಿ ಶಾಮರಾವ್ ಅವರ ಜನ್ಮದಿನವು ಸಂಘದ ಸದಸ್ಯರ ಪ್ರತಿಭಾ ಪ್ರದರ್ಶನದೊಂದಿಗೆ ಮಾರ್ಚ್ ೧ ತಾರೀಖಿನಂದು ಸುಂದರವಾಗಿ ನಡೆಯಿತು.ಸಂಘದ ಅಧ್ಯಕ್ಷರಾದ ಶ್ರೀ ಕುಶಲ್ ಹೆಗ್ಡೆ ಮತ್ತು ಉಪಾಧ್ಯಕ್ಷೆ ಶ್ರೀಮತಿ ಇಂದಿರಾ ಸಾಲಿಯಾನ್ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಿದರು.
ಸಂಘದ ಹೊಸ ಸದಸ್ಯರಾದಶ್ರೀ ಸಂತೋಷ್ ನಾಯಕ್ ಅವರ ಇಂಪು ಕೊಳಲು ವಾದನವು ಪ್ರೇಕ್ಷಕರಿಗೆ ಕರ್ಣಾನಂದವನ್ನು ನೀಡಿತು .ಯಕ್ಷಗುರು ಶ್ರೀ ಆನಂದ್ ಭಟ್ಟರು “ ದೇವಿ ಮಹಾತ್ಮೆ ‘ ಯಕ್ಷಗಾನದ ಚಂಡ ಮುಂಡ ರ ಪ್ರಸಂಗವನ್ನು ನಿರರ್ಗಳ ಮಾತುಗಾರಿಕೆ, ಅಭಿನಯದ ಮೂಲಕ ಪ್ರದರ್ಶಿಸಿ ಎಲ್ಲರ ಮನ ರಂಜಿಸಿದರು .
ಸಕ್ರೋಜಿ ದಂಪತಿಗಳ ಗೀಗಿ ಜಾನಪದ ಹಾಡು, ಶ್ರೀಮತಿ ಜ್ಯೋತಿ ಕಡಕೊಳಅವರ ಶಿಳ್ಳೆ ವಾದನ, ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಮತ್ತು ಸದಸ್ಯರ ನೃತ್ಯ ಹಾಗೂ ಹಾಡು ಸಂತಸದ ವಾತಾವರಣ ನಿರ್ಮಿಸಿತು. ಎಲ್ಲ ಕಲಾಕಾರರನ್ನು ಪದಾಧಿಕಾರಿಗಳು ಗೌರವಿಸಿದರು.
ಸಂಘದ ಹಿರಿಯ ಸದಸ್ಯರಾದ ಶ್ರೀ ಸುಭಾಷಚಂದ್ರ ಸಕ್ರೋಜಿ ಅವರು ಬರೆದ ಮತ್ತು ಕನ್ನಡ ಸಂಘವು ಪ್ರಕಟಣೆ ಮಾಡಿದ “ ಇತಿಹಾಸದ ಪುಟಗಳಿಂದ “ ಪುಸ್ತಕವನ್ನು ಕನ್ನಡ ಸಂಘದ ಪದಾಧಿಕಾರಿಗಳು ಬಿಡುಗಡೆ ಗೊಲ್ಲಿಸಿದರು.
ಪುಸ್ತಕದ ಬಗ್ಗೆ ಶ್ರೀಮತಿ ಸುಷ್ಮಾ ನರಗುಂದ ಅವರು ಮಾತಾಡಿದರು.
ಶ್ರೀಮತಿ ಪೂಜಾ ಪೂಜಾರಿ ನಿರೂಪಣೆ ಮಾಡಿದರು.ಶ್ರೀಮತಿ ನೇತ್ರಾ ಕುಲಕರ್ಣಿ ಮತ್ತು ಶ್ರೀಮತಿ ಪೂಜಾ ಪಾಟಿಲ್ ಸಹಕರಿಸಿದರು.
ಪ್ರೀತಿ ಭೋಜನ ದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.