ಕನ್ನಡ ಸಂಘ ಪುಣೆ ರಾಮನವಮಿ ನಿಮಿತ್ತ ಆಯೋಜಿಸಿದ, ರಾಮ ಮಂತ್ರವ ಜಪಿಸೋ ಕಾರ್ಯಕ್ರಮ ತುಂಬಾ ಸುಂದರವಾಗಿ ನೆರವೇರಿತು.
ಕನ್ನಡ ಸಂಘದ ಉಪಾಧ್ಯಕ್ಷೆ ಶ್ರೀಮತಿ ಇಂದಿರಾ ಸಾಲಿಯಾನ್ ಮತ್ತು ಶ್ರೀಮತಿ ಗೀತಾ ಭಟ್ ಅವರು ಶ್ರೀ ರಾಮ ದೇವರ ಕಿರು ಮೂರ್ತಿಯನ್ನು ತೊಟ್ಟಿಲಲ್ಲಿಟ್ಟುಜೋ ಜೋ ಜೋ ರಘುರಾಮ ಜೋ, ಜೋಗುಳ ಹಾಡಿದರು. ಶ್ರೀಮತಿ ಮಾಲತಿ ಕಲ್ಮಾಡಿ , ಶ್ರೀಮತಿ ರಾಗಿಣಿ ಕಲ್ಮಾಡಿ ಮತ್ತು ಶ್ರೀಮತಿ ಪುಷ್ಪಾ ಹೆಗ್ಡೆ ಅವರು, ಅವರ ಜೊತೆ ಕೂಡಿ ತೊಟ್ಟಿಲು ತೂಗಿ ಕಾರ್ಯಕ್ರಮ ಪ್ರಾರಂಭಿಸಿದರು.
ಶ್ರೀ ಚಂದ್ರಕಾಂತ್ ಹರಕುಡೆ ಅವರು ಎಲ್ಲ ಕಲಾವಿದರ ಪರಿಚಯ ಮಾಡಿಸಿದರು. ಅಧ್ಯಕ್ಷರಾದ ಶ್ರೀ ಕುಶಲ್ ಹೆಗ್ಡೆ ಅವರು ಕಲಾವಿದರನ್ನು ಸತ್ಕರಿಸಿದರು.
ಸುಪ್ರಸಿದ್ಧ ಗಾಯಕಿ ವಿದುಷಿ ನಂದಿನಿ ರಾವ್ ಗುಜರ ಮತ್ತು ಸುಪ್ರಸಿದ್ಧ ಸಿತಾರವಾದಕ ಮತ್ತು ಸಂಗೀತಗಾರ ಉಸ್ತಾದ್ ರಯೀಸ್ ಬಾಲೆ ಖಾನ್ ಅವರ ಭಕ್ತಿ ಸಂಗೀತವು ಎಲ್ಲರಿಗೂ ಕರ್ಣಾನಂದ ನೀಡಿತು .
ಸಹ ಕಲಾವಿದರಾದ ಸಂತೋಷ್ ನಾಯಕ್, ಪನ್ನಗ ರಾವ್, ಪಂಚಾಂಗ ಉಪಾಧ್ಯಾಯ, ಪಾಂಡುರಂಗ ಪವಾರ್ ಅವರ ಕೊಳಲು, ತಬಲಾ ಮೃದಂಗ ವಾದನ ಕೂಡ ಅತ್ಯಧ್ಬುತ ವಾಗಿತ್ತು. ಪ್ರೊಫೆಸರ್ ಗುರುರಾಜ್ ಕುಲಕರ್ಣಿ ಅವರು ಭಜನೆಗೆ ಹೊಂದಿಕೆಯಾಗುವ ರಾಮಾಯಣದ ವಿವಿಧ ಪ್ರಸಂಗಗಳ ಸುಂದರ ನಿರೂಪಣೆ ನೀಡಿ ರಂಜಿಸಿದರು.
ಕಾರ್ಯಕ್ರಮದಲ್ಲಿ ನೂರಾರು ಸಭಿಕರು ಭಾಗವಹಿಸಿ, ಕೊಸಂಬರಿ, ಪಾನಕದ ಪ್ರಸಾದ ಸ್ವೀಕರಿಸಿದರು.