ಕನ್ನಡ ಸಂಘ ಪುಣೆ , ದಿನಾಂಕ ೨೦ ಆಗಸ್ಟ್ ರಂದು ಕೃಷ್ಣಾ ಜನ್ಮಾಷ್ಟಮಿ ಪ್ರಯುಕ್ತ “ ಕೃಷ್ಣಾ ನೀ ಬೇಗನೆ ಬಾರೋ ‘
ಕಾರ್ಯಕ್ರಮವನ್ನು ಆಯೋಜಿಸಿತ್ತು.
ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಯೊಂದಿಗೆ ಆರಂಭಿಸಲಾಯಿತು .
ಕನ್ನಡ ಸಂಘದ ಸದಸ್ಯರಿಂದ ರಾಧಾ ಕೃಷ್ಣ ನೃತ್ಯ ಹಾಗೂ ಕೃಷ್ಣ ಭಕ್ತಿಯ ಹಾಡುಗಳು ಎಲ್ಲರ ಮನ ರಂಜಿಸಿದವು.ಕಾರ್ಯಕ್ರಮ ತುಂಬಾ ಸೊಗಸಾಗಿತ್ತು.
ಎರಡರಿಂದ ಎಂಟು ವರ್ಷದ ಮುದ್ದು ಮಕ್ಕಳು ಕೃಷ್ಣ ನ ವೇಷದಲ್ಲಿ ಕೋಲಾಹಲ ಮಾಡುತ್ತಾ ವೇದಿಕೆಯಲ್ಲಿ ಸೇರಿದ್ದು ಕಾರ್ಯಕ್ರಮದ ಮುಖ್ಯ ಆಕರ್ಷಣೆ ಆಗಿತ್ತು.
ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಕುಶಲ್ ಹೆಗ್ಡೆ ಅವರು ಕಲಾವಿದರನ್ನು ಸನ್ಮಾನಿಸಿದರು .
ಕನ್ನಡ ಸಂಘದ ಉಪಾಧ್ಯಕ್ಷೆ ಶ್ರೀಮತಿ ಇಂದಿರಾ ಸಾಲಿಯಾನ್ ಅವರು ಕೃಷ್ಣನ ವೇಷದಲ್ಲಿದ್ದ ಮುದ್ದು ಮಕ್ಕಳ್ಳನ್ನು ಸನ್ಮಾನಿಸಿದರು.
ಕಾರ್ಯಕ್ರಮದ ಕೊನೆಗೆ ಕೃಷ್ಣ ನ ಪ್ರೀತಿಯ ಅವಲಕ್ಕಿ ಹಾಗೂ ಮೊಸರು ಪ್ರಸಾದ ವಿತರಿಸಲಾಯಿತು .