ಕನ್ನಡ ಸಂಘ, ಪುಣೆ.
ನಮಸ್ಕಾರ,
ಕನ್ನಡ ಕಲೆ, ಸಂಸ್ಕೃತಿ ಮತ್ತು ಸಾಹಿತ್ಯ ಪ್ರೇಮಿಗಳಿಗೆ ಸಂತಸದ ಸುದ್ದಿ.
ಕನ್ನಡ ಸಂಘ, ಪುಣೆಯ ಸಹಯೋಗದೊಂದಿಗೆ ಕರ್ನಾಟಕ ಸರಕಾರ,ರಂಗಾಯಣ ಮೈಸೂರು ಇವರು ಖ್ಯಾತ ಸಾಹಿತಿ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಅವರ ಮೇರುಕೃತಿ ಪರ್ವ ಆಧರಿಸಿದ
ಮಹಾ ರಂಗ ಪ್ರಯೋಗ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಈ ನಾಟಕದ ರಂಗರೂಪ ಮತ್ತು ನಿರ್ದೇಶನ ಶ್ರೀ ಪ್ರಕಾಶ್ ಬೆಳವಾಡಿ ಅವರದಿದೆ. ಈ ಮಹಾನಾಟ್ಯದ ಪ್ರಯೋಗ ಸಂಪೂರ್ಣ ದಿವಸ ನಡೆಯಲಿದೆ.
ರವಿವಾರ, ದಿನಾಂಕ 03 ಜುಲೈ, 2022
ಸಮಯ: ಮುಂಜಾನೆ 10.30 ರಿಂದ ಸಾಯಂಕಾಲ 6.30 ಗಂಟೆ
ಸ್ಥಳ: ಶಕುಂತಲಾ ಜಗನ್ನಾಥ ಶೆಟ್ಟಿ ಸಭಾಗೃಹ, ಸರ್ವೆ ನಂಬರ್ 36, ಜಿ ಎಮ್ ಶೆಟ್ಟಿ ಶೈಕ್ಷಣಿಕ ಸಂಕುಲ, ಗಣೇಶ ನಗರ ರಸ್ತೆ, ಎರಂಡವಣೆ, ಪುಣೆ 38
ಈಗಾಗಲೇ ಕರ್ನಾಟಕದಲ್ಲಿ ಅತ್ಯಂತ ಯಶಸ್ವಿ ಪ್ರದರ್ಶನಗಳನ್ನು ನೀಡಿ ಜಯಭೇರಿಯನ್ನು ಮೊಳಗಿಸಿದೆ. ಈಗ ರಾಜ್ಯದ ಹೊರಗಡೆ ತಮ್ಮ ಪುಣೆಯಲ್ಲಿ ಪ್ರದರ್ಶನ ಏರ್ಪಡಿಸಲಾಗಿದ್ದು ಕನ್ನಡಿಗರಾದ ತಾವು ಸ್ವತಃ ಮತ್ತು ಕಲಾರಸಿಕ ಬಂಧು ಮಿತ್ರರನ್ನು ತಮ್ಮೊಂದಿಗೆ ನಾಟ್ಯದ ರಸದೌತಣ ಕ್ಕಾಗಿ ಕರೆದು ತನ್ನಿರಿ .
ಪೂರ್ಣ ದಿವಸ ನಡೆಯಲಿರುವ ಈ ಪ್ರಯೋಗದ ಮಧ್ಯಾಹ್ನದ ಬಿಡುವಿನಲ್ಲಿ ಯೋಗ್ಯ ದರದಲ್ಲಿ ಫಲ ಉಪಹಾರ ಗಳ ಸ್ಟಾಲ ಗಳ ವ್ಯವಸ್ಥೆ ಮಾಡಲಾಗಿದೆ. ಅವಶ್ಯವಾಗಿ ಅವುಗಳ ಸದುಪಯೋಗ ಮಾಡಿಕೊಳ್ಳಬೇಕಾಗಿ ವಿನಂತಿ.
ನಾಟಕವು ಸರಿಯಾದ ಸಮಯಕ್ಕೆ ಪ್ರಾರಂಭವಾಗುವುದರಿಂದ ತಾವೆಲ್ಲರೂ ಸ್ವಲ್ಪ ಮುಂಚಿತವಾಗಿ ಆಗಮಿಸಬೇಕೆಂದು ವಿನಂತಿ.
ಸಂಪರ್ಕಿಸಿ:
ಶ್ರೀಮತಿ ಪೂಜಾ ಪಾಟೀಲ್ 9699127678,
ಫ್ರಂಟ್ ಆಫೀಸ್ 02025436893
ಸಾಂಸ್ಕೃತಿಕ ಸಮಿತಿ,
ಕನ್ನಡ ಸಂಘ ಪುಣೆ