Samachar

Talent Show

ಕೊವಿಡ್ ಮಹಾ ಮಾರಿಯ ಎರಡು ವರ್ಷಗಳ ನಂತರ ಕನ್ನಡ ಸಂಘ ಪುಣೆಯಲ್ಲಿ ದಿನಾಂಕ ೦೧-೦೩-೨೦೨೨ ರಂದು ಗುಂದುರಾಜ್ ಶೆಟ್ಟಿ ಸಭಾಗ್ರಹ ದಲ್ಲಿ ಹೊಸ ಹುರುಪಿನೊಂದಿಗೆ ಆಚರಿಸಲಾಯಿತು.
ಕನ್ನಡ ಸಂಘದ ಸಂಸ್ಥಾಪಕರಲ್ಲೋಬ್ಬರಾದ ದಿವಂಗತ ಕಲ್ಮಾಡಿ ಶ್ಯಾಮರಾಯರ ಜನ್ಮದಿನದಂದು ಅದ್ದೂರಿಯಿಂದ ಆಚರಿಸಲಾಯಿತು ‘
ಸಂಘದ ಅಧ್ಯಕ್ಷ ಶ್ರೀ ಕುಶಲ್ ಹೆಗ್ಡೆ ,ಉಪಾಧ್ಯಕ್ಷೆ ಶ್ರೀಮತಿ ಇಂದಿರಾ ಸಾಲಿಯಾನ್ ,ಕಾರ್ಯದರ್ಶಿ ಶ್ರೀಮತಿ ಮಾಲತಿ ಕಲ್ಮಾಡಿ ಜನಸಂಪರ್ಮಕಾಧಿಕಾರಿ ರಾಮದಾಸ್ ಆಚಾರ್ಯ ಹಾಗೂ ಕನ್ನಡ ಮಾಧ್ಯಮ ಶಾಲಾ ಅಧ್ಯಾಪಕ ವರ್ಗವರ್ಗ ಮತ್ತು ಉಪಸ್ಥಿತ ಗಣ್ಯರು ದೀಪ ಪ್ರಜ್ವಲಿಸಿ ಡಾ. ಶಾಮರಾವ್ ಅವರ ತೈಲ ಚಿತ್ರಕ್ಕೆ ಪುಷ್ಪ ಅರ್ಪಿಸಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .
ಸ್ವಾಗತ ಸಮಾರಂಭದ ನಂತರ ಪುಟ್ಟ ಪುಥಾನಿಗಳಿಂದ ಹಿಡಿದು ಜ್ಯೇಷ್ಠ ನಾಗರಿಕರು ತಮ್ಮ ಪ್ರತಿಭೆಯ ಪ್ರದರ್ಶನ ನೀಡಿದರು.
ಶ್ರೀಮತಿ ಇಂದಿರಾ ಸಾಲಿಯಾನ್ ಅವರು ತಮ್ಮ ಕವನ ಗಾಯನಗಳಿಂದ ಶಾಮರಾವ್ ಅವರ ಅಪ್ರತಿಮ ಸ್ನೇಹಮಯ ನೆನಪನ್ನು ಸ್ಮರಿಸಿದರು. ಗಾನ ,ಸಮೂಹ ಗಾನ ,ಕಥಕ್ ನೃತ್ಯ ಪುಟ್ಯ ಕಲಾಕಾರನಿಂದ ಯಕ್ಷಗಾನ
ವಿಶ್ವನಾಥ್ ಶೆಟ್ಟಿ ಹಾಗೂ ರಾಮದಾಸ್ ಆಚರ್ಯರಿಂದ ಕಾವ್ಯ ನವ್ಯ ಕಾವ್ಯ ವಾಚನ ಜ್ಯೋತಿ ಕಡಕೊಲ್ ಅವರ ಶಿಟ್ಟಿ ಹಾಡು
ಮುಂತಾದ ವೈಶಿತ್ಯಪೂರ್ಣ ಪ್ರತಿಭಾ ಪ್ರದರ್ಶನ ,ಕಲ್ಮಾಡಿ ಪರಿವಾರದ ಕಿರಿಯ ಕಲಾಕಾರರಿಂದ ವಿಶಿಷ್ಠ ಧ್ತನಿ ಮುದ್ರಿತ ವಿಶೇಷ ಕಾರ್ಯಕ್ರಮಗಳು ನೆರೆದ ಪ್ರೇಕ್ಷಕರ ಮನ ಸೆಳೆಯಿತು .
ಶ್ರೀಮತಿ ಮಾಲತಿ ಕಲ್ಮಾಡಿ ಶಾಮರಾಯರ ಕನ್ನಡಪರ ಸೆಳೆತ ,ತಮ್ಮ ಪರಿವಾರದ ,ವಿದ್ಯಾರ್ಥಿಗಳ ಸಹಪಾಠಿಗಳ ಜೊತೆಗಿನ ನಂಟು ಮತ್ತು ಸರಳತೆಗಳ ಬಗ್ಗೆ ವಿವರಿಸಿ ಅವರ ಜೊತೆಗಿನ ನೆನಪುಗಳನ್ನು ಸ್ಮರಿಸಿದರು . ಭಾಗವಹಿಸಿದ ಎಲ್ಲಾ ಪ್ರತಿಭಾವಂತರನ್ನು ಸತ್ಕರಿಸಲಾಯಿತು.
ಪೂಜಾ ಪೂಜಾರಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು.
ಕೊನೆಯಲ್ಲಿ ಮಹಾಶಿವರಾತ್ರಿ ನಿಮಿತ್ತ ವಿಶೇಷ ಅಲ್ಪಾಹಾರಹಾ ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು

Archives