Samachar

Sant Purandardas Music Competition

ಪುರಂದರ ದಾಸರ ಆರಾಧನೆ ನಿಮಿತ್ತ ಕನ್ನಡ ಸಂಘ ಪುಣೆ ಆಯೋಜಿಸಿದ್ದ ಪುರಂದರ ದಾಸರ ಕೀರ್ತೆಗಳನ್ನು ಗಾಯನ ಸ್ಪರ್ಧೆಯ ಕಾರ್ಯಕ್ರಮ ಈ ವರ್ಷ ಅಂತರ್ಜಾಲದ ಮಾಧ್ಯಮದಲ್ಲಿ ಏರ್ಪಟ್ಟಿತು.

ಫೆಬ್ರವರಿ ೧೨ರಂದು ಸಾಯಂಕಾಲ ೫ ಗಂಟೆಗೆ ಪಾರಿತೋಷಕ ಕಾರ್ಯಕ್ರಮ ನಡೆಯಿತು.

ಸುಮಾರು ೬೫ ಸ್ಪರ್ಧಾಳುಗಳು ಭಾಗವಹಿಸಿದ್ದರು. ೧೨ ವರ್ಷದ ವರೆಗೆ ,ನಂತರ ೧೨ರಿಂದ೧೮ವರ್ಷದ ವರೆಗೆ ಮತ್ತು ೧೮ವರ್ಷ ಮೇಲಿನವರೆಗೆ ಹೀಗೆ ಮೂರು ಗುಂಪು ಗಳಿದ್ದು ಪ್ರತಿ ಯೊಂದರಲ್ಲಿ ೫ ಜನರಿಗೆ ಪಾರಿತೋಷಕ ನೀಡಲಾಯಿತು.
ಶ್ರೀಮತಿ ಶೋಭಾ ಪಂಚಾಂಗಮಠ ಅವರು ಸ್ವಾಗತ ಕೋರಿ, ನಿರೂಪಣೆ ಮಾಡಿದರು. ನಂತರ ಸಂಘದ ಉಪಾಧ್ಯಕ್ಷೆ ಹಾಗೂ ಸಾಂಸ್ಕೃತಿಕ ಸಮಿತಿ ಅಧ್ಯಕ್ಷೆ ಶ್ರೀಮತಿ ಇಂದಿರಾ ಸಾಲಿಯಾನ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು ಮತ್ತು ದಾಸರ ಮಹಿಮೆ ಹಾಗೂ ಕನ್ನಡ ಸಂಘ ಈ ಕಾರ್ಯಕ್ರಮ ಆಯೋಜಿಸುವ ಕಾರಣ ಮತ್ತು ಮಹತ್ವವನ್ನು ತಿಳಿಸಿಕೊಟ್ಟರು.
ಕನ್ನಡ ಮಾಧ್ಯಮದ ಪ್ರಾಂಶುಪಾಲರಾದ ಶ್ರೀ ಚಂದ್ರಕಾಂತ ಹಾರಕುಡೆ ಅವರು ತೀರ್ಪುಗಾರರ ಪರಿಚಯ ಮಾಡಿದರು.
ಶ್ರೀ ಶಿರೀಶ್ ಬೋಕಿಲ್ ಹಾಗೂ ಶ್ರೀ ಉಮಾಶಂಕರ್ ಬೆಲಾವಲೆ ಅವರು ಮಾತನಾಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ಪರ್ಧಾಳುಗಳ ಬಗ್ಗೆ ಹಾಗೂ ಸ್ಪರ್ಧೆಯ ಮಹತ್ವದ ಬಗ್ಗೆ ಮಾತನಾಡಿದರು.
ನಂತರ ಪಾರಿತೋಷಕ ಪಡೆದವರ ವಿಡಿಯೋ ತೋರಿಸಲಾಯಿತು.
ನಂತರ ಶ್ರೀ ಹಾರಕುಡೆ ಅವರು ಶ್ರೀ ನವೀನ್ ಅಕ್ಕಿವಳ್ಳಿ ಅವರ ಪರಿಚಯ ಮಾಡಿಕೊಟ್ಟರು. ಶ್ರೀ ಅಕ್ಕಿವಳ್ಳಿ, ಹಿರಿಯರ ಘಟಕದ ತೀರ್ಪುಗಾರರಾಗಿದ್ದರು.
ಶ್ರೀ ಅಕ್ಕಿವಳ್ಳಿ ಅವರು ಸಂಗೀತ ಸಾಧನೆ ಮತ್ತು ತಮ್ಮ ಗುರುಗಳು ಹಾಗೂ ತಾವು ಇದೇ
ಕಾರ್ಯಕ್ರಮದಲ್ಲಿ ಸ್ಪರ್ದ್ದಿಸಿದ್ದರ ಬಗ್ಗೆ ಮಾತನಾಡಿದರು ಮತ್ತು ಪುರಂದರದಾಸರ ಭಜನೆಯನ್ನು ಹಾಡಿದರು.
ನಂತರ ಹಿರಿಯರ ಘಟಕದ ಫಲಿತಾಂಶ ತಿಳಿಸಲಾಯಿತು ಮತ್ತು ಪಾರಿತೋಷಕ ಪಡೆದವರ ವಿಡಿಯೋ ಹಾಕಲಾಯಿತು.
ಕಾರ್ಯಕ್ರಮದ ಎಲ್ಲ ತಾಂತ್ರಿಕ ಕೆಲಸವನ್ನು ಶ್ರೀಮತಿ ನೇತ್ರಾ ಕುಲಕರ್ಣಿ ಅವರು ಸಮರ್ಥವಾಗಿ ನೆರವೇರಿಸಿದರು.
ಸಂಘದ ಸಚಿವೆ ಶ್ರೀಮತಿ ಮಾಲತಿ ಕಲ್ಮಾಡಿ ಹಾಗೂ ಖಜಾಂಚಿ ಶ್ರೀಮತಿ ರಾಧಿಕಾ ಶರ್ಮಾ ಅವರು ಉಪಸ್ಥಿತರಿದ್ದು ಎಲ್ಲರನ್ನು ಅಭಿನಂದಿಸಿದರು.

ನಂತರ ಕಾರ್ಯಕ್ರಮದ ಕೊನೆಯ ಹಂತವಾಗಿ ವಂದನಾರ್ಪಣೆಯನ್ನು ಸಾಂಸ್ಕೃತಿಕ ಸಮಿತಿಯ ಉಪಾಧ್ಯಕ್ಷೆ ಶ್ರೀಮತಿ ಜ್ಯೋತಿ ಕಡಕೋಳ ಅವರು ಮಾಡಿದರು.

Archives