Samachar

Purandaradasa Aradhana 2023

ತಿ ವರ್ಷದಂತೆ ಪುಣೆಕನ್ನಡ ಸಂಘದ ಪುರಂದರದಾಸರ ಕೀರ್ತನೆ ಸ್ಪರ್ಧೆಯು ಫೆಬ್ರವರಿ 11 ರಂದು 

  ಶ್ರೀ ಗುಂಡುರಾಜ್ ಎಂ ಶೆಟ್ಟಿ  ಮೆಮೋರಿಯಲ್ ಹಾಲ್ ನಲ್ಲಿ ಅಚ್ಚುಕಟ್ಟಾಗಿ ನಡೆಯಿತು.   ದೀಪ ಪ್ರಜ್ವಲನೆ  ನಂತರ 4 ಗಂಟೆಗೆ  ಆರಂಭವಾದ ಕಾರ್ಯಕ್ರಮದಲ್ಲಿ, 

ಮೂರು ವಿಭಾಗಗಳಲ್ಲಿ ಸುಮಾರು 50 ಜನರು ಭಾಗವಹಿಸಿದ್ದರು. 

ಕನ್ನಡದವರು ಅಲ್ಲದೇ ತೆಲುಗು, ತಮಿಳು ಹಾಗೂ ಮರಾಠಿ  ಭಾಷೆಯ ಮಕ್ಕಳು ಭಾಗವಹಿಸಿದ್ದರು. 

5 ವರ್ಷದ ಪುಟಾಣಿ ಮಗು ವಿನಿಂದ 76 ವರ್ಷದ ಮಹಿಳೆ ಯ ವರೆಗಿನ ಕನ್ನಡಿಗರು, ತೆಲುಗು, ತಮಿಳು ಹಾಗೂ ಮರಾಠಿ ಭಾಷಿಕರು ದಾಸರ ಪದ ಹಾಡಿ, ಸಂಗೀತಕ್ಕೆ ಭಾಷೆ, ಜಾತಿಯ ಭೇದವಿಲ್ಲ ಎಂದು ತೋರಿಸಿಕೊಟ್ಟರು. 

ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಕುಶಲ ಹೆಗ್ಡೆ ಅವರು ಮಕ್ಕಳ ಹಾಡುಗಳನ್ನು ಕೇಳಿ ಆನಂದಿಸಿದರು. 

ಸಬ್ ಜೂನಿಯರ್, ಜೂನಿಯರ್ ಹಾಗೂ ಸೀನಿಯರ್ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಮತ್ತು ಸಮಾಧಾನಕರ  ಬಹುಮಾನಗಳನ್ನು ಶ್ರೀಮತಿ ಇಂದಿರಾ ಸಾಲಿಯಾನ್ ಮತ್ತು ನಿರ್ಣಾಯಕರು ವಿತರಿಸಿದರು. 

ನಿರ್ಣಾಯಕರಾದ ಶ್ರೀಮತಿ ಕಶ್ಮೀರಾ ಸರ್ನೋಬತ್ ಮಾತನಾಡಿ, ಮಕ್ಕಳಿಗೆ ಮಾರ್ಗದರ್ಶನ ಮಾಡಿದರು. 

ಶ್ರೀಮತಿ ಇಂದಿರಾ ಸಾಲಿಯಾನ್ ಅವರು ಮಾತಾಡುತ್ತಾ ಮುಗ್ಧ ಮಕ್ಕಳು ಹಾಡುತ್ತಿರುವಾಗ ಪುರಂದರ ದಾಸರ  ವಿಠ್ಠಲನೇ ಹಾಡುವಂತೆ ಭಾಸವಾಯಿತು   ಮತ್ತು ಇಂದು ಪುರಂದರ ದಾಸರು ಎಲ್ಲ ಭಾಷಿಕರನ್ನು ಕೀರ್ತನೆಯ ಮೂಲಕ ಒಂದು ಗೂಡಿಸಿದ್ದಾರೆ ಎಂದು ಹೇಳಿದರು  

ಶ್ರೀಮತಿ ನೇತ್ರಾ ಕುಲಕರ್ಣಿ, ಕಾರ್ಯಕ್ರಮ ನಿರೂಪಣೆ ಮಾಡಿದರು  ಮಾಡಿದರು ಮತ್ತು ಶ್ರೀಮತಿ ಪೂಜಾ ಪಾಟೀಲ್  ವಂದನಾರ್ಪಣೆ ಮಾಡಿದರು 

Archives