Samachar

Parva Play

ಪುಣೆ :(www.kiranvarta.com)ಕನ್ನಡ ಸಂಘದ ಶ್ರೀಮತಿ ಶಕುಂತಲಾ ಜಗನ್ನಾಥ್ ಶೆಟ್ಟಿ ಸಭಾಭವನದಲ್ಲಿ
ಜುಲೈ ಮೂರರಂದು ಪರ್ವ ನಾಟಕ ಪ್ರಯೋಗವು ಅದ್ದೂರಿಯಾಗಿ ನಡೆಯಿತು.
ಕನ್ನಡ ಸಂಘದ ಅಧ್ಯಕ್ಷರಾದ ಕುಶಲ್ ಹೆಗ್ಡೆ , ಉಪಾಧ್ಯಕ್ಷೆ ಇಂದಿರಾ ಸಾಲಿಯಾನ್ , ಕಾರ್ಯದರ್ಶಿ ಮಾಲತಿ ಕಲ್ಮಾಡಿ
ಹಾಗೂ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಮತ್ತು ಅಂಜು ಸಿಂಗ್ ಅವರು ದೀಪ ಪ್ರಜ್ವಲಿಸಿ
ಕಾರ್ಯಕ್ರಮವನ್ನು ಉದ್ಘಾಟಿಸಿದರು .

 

ಕನ್ನಡ ಸಂಘದ ಉಪಾಧ್ಯಕ್ಷೆ ಇಂದಿರಾ ಸಾಲಿಯಾನ್ ಅವರು ಎಲ್ಲರನ್ನೂ ಸ್ವಾಗತಿಸಿ ಕನ್ನಡ ಸಂಘ ಆಯೋಜಿಸುವ
ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು. ನಂತರ ಅಡ್ಡಂಡ ಸಿ ಕಾರ್ಯಪ್ಪ ಅವರು ರಂಗಾಯಣದ ಬಗ್ಗೆ
ಹಾಗೂ ಪರ್ವದ ಬಗ್ಗೆ ಮಾತನಾಡಿ ಸುಂದರ ಕನಸನ್ನು ನನಸಾಗಿಸಿದ್ದರ ಬಗ್ಗೆ ಹೇಳಿದರು . ಕನ್ನಡ ಸಂಘ ಪುಣೆ ಯಲ್ಲಿ
ಪ್ರದರ್ಶನವಾಗುತ್ತಿರುವ ಪರ್ವದ 40ನೆಯ ಮತ್ತು ಕೊನೆಯ ಪ್ರಯೋಗ ಎಂದು ತಿಳಿಸಿದರು .ಕನ್ನಡ ಸಂಘದ ಸಹಕಾರದ
ಬಗ್ಗೆ ಧನ್ಯವಾದಗಳು ಅರ್ಪಿಸಿದರು. ನಾಟಕವನ್ನು ಪ್ರಕಾಶ್ ಬೆಳವಾಡಿ ಅವರು ನಿರ್ದೇಶಿಸಿ, ಮೂಲಕೃತಿಗೆ
ಲೋಪವಾಗದಂತೆ ಕಾದಂಬರಿಗೆ ಪೂರ್ಣ ನ್ಯಾಯ ಒದಗಿಸಿದ್ದಾರೆ.

 

ವೀಕ್ಷಕರನ್ನು ಬೆರಗಾಗಿಸಿ ತಮ್ಮ ಆಸನದಲ್ಲಿ ಕೊನೆಯವರೆಗೂ ಹಿಡಿದಿಟ್ಟಿತ್ತು ಈ ನಾಟಕ. ಒಂದು ಅಥವಾ ಎರಡು
ಗಂಟೆ ನಾಟಕ ವೀಕ್ಷಣೆ ಮಾಡಿ ಹೋಗಲು ಬಂದವರು ಪೂರ್ತಿ ನಾಟಕ ನೋಡುವವರೆಗೆ ಎದ್ದು ಹೋಗಲಿಲ್ಲ
.ರಂಗಾಯಣ ತಂಡದ ರಂಗ ವಿನ್ಯಾಸ, ರಂಗಪರಿಕರ, ವಸ್ತ್ರ ವಿನ್ಯಾಸ ,ಬೆಳಕು, ಸಂಗೀತ ಸಂಯೋಜನೆ
ಅತ್ಯುತ್ತಮವಾಗಿತ್ತು . ಕಲಾರಸಿಕರು ನಾಟಕವನ್ನು ಮೆಚ್ಚಿ ಕೊನೆಗೆ ಎದ್ದುನಿಂತು ರಂಗಾಯಣದ ಸಂಪೂರ್ಣ ತಂಡಕ್ಕೆ
ಅಭಿನಂದನೆ ಸಲ್ಲಿಸಿದರು.

 

ಕಾರ್ಯಕ್ರಮದ ಕೊನೆಗೆ ಅಡ್ಡಂಡ ಸಿ ಕಾರ್ಯಪ್ಪ ಅವರು ಎಲ್ಲ ಕಲಾವಿದರ ಹಾಗೂ ತಂತ್ರಜ್ಞರ ಪರಿಚಯ ಮಾಡಿ
ಕೊಟ್ಟರು ಮತ್ತು ವೀಕ್ಷಕರಿಗೆ ಧನ್ಯವಾದಗಳನ್ನುಅರ್ಪಿಸಿದರು.
ಕತಾರ ದಿಂದ ಬಂದ ಜಾಗತಿಕ ಬಸವಶಾಂತಿ ಸಂಸ್ಥೆ ಹಾಗೂ ಉತ್ತರ ಕರ್ನಾಟಕ ಬಳಗದ ಅಧ್ಯಕ್ಷರು ಆಗಿರುವ ಶಶಿಧರ್
ಹೆಬ್ಬಾಳ್ ಅವರು ಕನ್ನಡ ಸಂಘದ ಕಚೇರಿಗೆ ಭೇಟಿ ನೀಡಿ ಪರ್ವ ನಾಟಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕನ್ನಡ
ಸಂಘಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.

Archives