Samachar

Nada Habba Dasara

ಕನ್ನಡ ಸಂಘ ಪುಣೆ ಯಲ್ಲಿ ನಾಡ ಹಬ್ಬ ದಸರಾ ಕಾರ್ಯಕ್ರಮ ಅದ್ಧೂರಿಯಾಗಿ ಅಕ್ಟೋಬರ್ ೫ ರಂದು ನಡೆಯಿತು  

ಕನ್ನಡ ಮಾಧ್ಯಮ ಶಾಲೆಯ ವಠಾರದಲ್ಲಿ ದೀಪ ಪ್ರಜ್ವಲನೆ ಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಗೊಂಬೆಗಳ ಪ್ರದರ್ಶನ ನಡೆಯಿತು. 

ಕನ್ನಡ ಸಂಘದ ಸದಸ್ಯರೆಲ್ಲರೂ ದಸರಾ ಶುಭಾಶಯಗಳನ್ನು ಹಂಚಿಕೊಂಡು, ಸಂಗೀತ ಕುರ್ಚಿ ಮತ್ತು ತಂಬೋಲ ಆಟಗಳಲ್ಲಿ ಸಂತೋಷ ದಿಂದ ಭಾಗವಹಿಸಿದರು . 

ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯರಾದ ಶ್ರೀಮತಿ ಮೀರಾ ಕಲ್ಮಾಡಿ ಹಾಗೂ ಶ್ರೀ ಸುರೇಶ್ ಕಲ್ಮಾಡಿ, ಅಧ್ಯಕ್ಷ ರಾದ ಶ್ರೀ ಕುಶಲ ಹೆಗ್ಡೆ,ಉಪಾದ್ಯಕ್ಷೆ  ಶ್ರೀಮತಿ ಇಂದಿರಾ ಸಾಲಿಯಾನ್, ಕಾರ್ಯದರ್ಶಿ ಶ್ರೀಮತಿ ಮಾಲತಿ ಕಲ್ಮಾಡಿ ವಿಶ್ವಸ್ಥ ರಾದ ಶ್ರೀಮತಿ ರಾಧಿಕಾ ಶರ್ಮಾ ,ಶ್ರೀಮತಿ ದೇವಿಕಾ   ಶೆಟ್ಟಿ ಮತ್ತು ಅಧಿಕ ಸಂಖ್ಯೆ ಯಲ್ಲಿ ಸದಸ್ಯರು  ಭಾಗವಹಿಸಿದ್ದರು. 

ಶ್ರೀಮತಿ ಇಂದಿರಾ ಸಾಲಿಯಾನ್ , ಶ್ರೀಮತಿ ಮೀರಾ ಕಲ್ಮಾಡಿ, ಶ್ರೀಮತಿ ಮಾಲತಿ ಕಲ್ಮಾಡಿ, ಶ್ರೀಮತಿ ಜ್ಯೋತಿ ಕಡಕೋಳ, ಶ್ರೀಮತಿ ಶೋಭಾ ಪಂಚಾಂಗಮಠ, ಶ್ರೀಮತಿ ನೇತ್ರಾ ಶ್ರೀಮತಿ ಛಾಯಾ ಶ್ರೀಮತಿ ಸುಧಾ ಆಚಾರ್ಯ ಮತ್ತು ಶ್ರೀಮತಿ ಸಾಯಿಭದ್ರ ಮತ್ತು ಪುಟಾಣಿ ಮಕ್ಕಳು ಭಕ್ತಿ ಗೀತೆಗಳನ್ನು ಹಾಡಿದರು. 

ಹಿರಿಯ ಸದಸ್ಯರಾದ ಶ್ರೀ ಸುಭಾಶ್ಚಂದ್ರ  ಸಕ್ರೋಜಿ ಅವರು ಕೌನ್ ಬನೆಗಾ ಕರೋಡ್ ಪತಿ  ರೀತಿಯಲಿ ಪ್ರಶ್ನೆಗಳನ್ನು ಕೇಳಿ ಎಲ್ಲರ ಮನ ರಂಜಿಸಿದರು. 

ಎಲ್ಲ ಸದಸ್ಯರು ಅಲ್ಪೋಪ ಹಾರವನ್ನು ಸ್ವೀಕರಿಸಿದರು. 

Archives