Samachar

Ramnavmi Celebration

ಕನ್ನಡ ಸಂಘ ಪುಣೆ ಪ್ರತಿ ವರ್ಷ ಶ್ರೀ ರಾಮನವಮಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತದೆ.
ಈ ವರ್ಷ ಏಪ್ರಿಲ್ ೧೦ ರಂದು ಕನ್ನಡ ಸಂಘದ ಡಾಕ್ಟರ್ ಕೇತ್ಕರ್ ರೋಡ್ ನಲ್ಲಿರುವ ದಿ. ಗುಂಡುರಾಜ್ ಎಂ ಶೆಟ್ಟಿ ಮೆಮೋರಿಯಲ್ ಹಾಲ್ ನಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಕನ್ನಡ ಸಂಘದ ಅಧ್ಯಕ್ಷ ಶ್ರೀ ಕುಶಲ ಹೆಗ್ಡೆ, ಉಪಾಧ್ಯಕ್ಷೆ ಶ್ರೀಮತಿ ಇಂದಿರಾ ಸಾಲಿಯಾನ್,ಕಾರ್ಯದರ್ಶಿ ಶ್ರೀಮತಿ ಮಾಲತಿ ಕಲ್ಮಾಡಿ, ವಿಶ್ವಸ್ಥರಾದ ಡಾ ಬಾಲಾಜಿತ್ ಶೆಟ್ಟಿ ಮತ್ತು ಶ್ರೀ ಅಶ್ವಿನ್ ಶಾಸ್ತ್ರಿ ಶ್ರೀ ರಾಮನ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಿ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಆರಂಭಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಕನ್ನಡ ಶಾಲಾ ಸಂಗೀತ ಶಿಕ್ಷಕಿ ಶ್ರೀಮತಿ ರಜನಿ ಪಚ್ಛಾಪೂರ್ ಇವರ ನಿಧನಕ್ಕೆ ಮೌನವನ್ನು ಆಚರಿಸಿ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.
ನಗರದ ಚಿಂಚವಾಡ್ ದಲ್ಲಿರುವ ಶ್ರೀ ಹರಿಪ್ರಿಯಾ ಭಜನಾ ಮಂಡಳಿಯ ಶ್ರೀಮತಿ ರಮಾ ಕಾತರಕಿ ಹಾಗೂ ತಂಡ ದವರಿಂದ ಸುಮಾರು ಒಂದೂವರೆ ಗಂಟೆ ನಿರರ್ಗಳ ಸುಮಧುರ ಭಜನೆ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿತು.
ಭಜನಾ ಮಂಡಳಿಯ ಸದಸ್ಯರನ್ನು ಉಪಾಧ್ಯಕ್ಷೆ ಶ್ರೀಮತಿ ಇಂದಿರಾ ಸಾಲಿಯಾನ್ ಹಾಗೂ ಶ್ರೀಮತಿ ಮಾಲತಿ ಕಲ್ಮಾಡಿ ಅವರು ಸತ್ಕರಿಸಿದರು.
ಎಲ್ಲ ಮಹಿಳಾ ಸದಸ್ಯರು,
ಉಪಾಧ್ಯಕ್ಷೆ ಶ್ರೀಮತಿ ಇಂದಿರಾ ಸಾಲಿಯಾನ್ ಅವರ ಸುಮಧುರ ಜೋಗುಳ ದೊಂದಿಗೆ ಶ್ರೀ ರಾಮನ ಮೂರ್ತಿಯನ್ನು ತೊಟ್ಟಿಲಲ್ಲಿ ಇರಿಸಿ ತೂಗಿದರು.
ಭಕ್ತರಿಗೆ ಕೋಸಂಬರಿ ಮತ್ತು ಪಾನಕದ ಪ್ರಸಾದವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜನಸಂಪರ್ಕ ಅಧಿಕಾರಿ ಶ್ರೀ ರಾಮದಾಸ್ ಆಚಾರ್ಯ, ಕನ್ನಡ ಮಾಧ್ಯಮದ ಮುಖ್ಯೋಪಾಧ್ಯಾಯರಾದ ಶ್ರೀ ಚಂದ್ರಕಾಂತ ಹಾರಕೂಡೆ ಹಾಗೂ ಸಂಘದ ಸದಸ್ಯರು ಉಸ್ಥಿತರಿದ್ದರು.
ಶ್ರೀಮತಿ ಜ್ಯೋತಿ ಕಡ್ಕೊಳ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ಶ್ರೀಮತಿ ಪೂಜಾ ಪಾಟೀಲ್ ವಂದಿಸಿದರು.

Archives