Samachar

Kavi Sammelana Program

ಕನ್ನಡ ಸಂಘ ಪುಣೆ ಪ್ರತಿ ವರ್ಷ ಆಯೋಜಿಸುವ ಕವಿಸಮ್ಮೇಳನ ಈ ವರ್ಷ ದಿನಾಂಕ 26 ಫೆಬ್ರುವರಿ ಯಂದು ಯಶಸ್ವಿ ಯಾಗಿ ನೆರವೇರಿತು.ಸುಮಾರು 75 ಜನರು ವೀಕ್ಷಕರು ಇದ್ದು ಎಲ್ಲ ಕೋವಿಡ್ ನಿಯಮ ಗಳನ್ನು ಪಾಲಿಸಲಾಗಿತ್ತು.
18 ಕವಿಗಳು ಭಾಗವಹಿಸಿ ತಮ್ಮ ಸ್ವರಚಿತ ಕವನಗಳನ್ನು ಪ್ರಸ್ತುತ ಪಡಿಸಿದರು.
ಬಸವ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಡಾಕ್ಟರ್ ಶಶಿಕಾಂತ್ ಪಟ್ಟಣ ಅವರು ಸಭೆಯ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶೋಭೆ ತಂದರು.
ಕಾರ್ಯಕ್ರಮವನ್ನು ಗಣ್ಯರಾದ ಶ್ರೀಯುತ ಡಾಕ್ಟರ್ ಶಶಿಕಾಂತ್ ಪಟ್ಟಣ ಹಾಗೂ ಕನ್ನಡ ಸಂಘದ ಉಪಾಧ್ಯಕ್ಷೆ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ಶ್ರೀಮತಿ ಇಂದಿರಾ ಸಾಲಿಯಾನ್ ಅವರು ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟಿಸಿದರು. ಕನ್ನಡ ಮಾಧ್ಯಮದ ಮಕ್ಕಳು” ಹಚ್ಚೇವು ಕನ್ನಡದ ದೀಪ ” ಹಾಡನ್ನು ಸುಂದರವಾಗಿ ಹಾಡಿದರು.
ಶ್ರೀಮತಿ ಇಂದಿರಾ ಸಾಲಿಯಾನ್ ಅವರು ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿ , ಕನ್ನಡ ಸಂಘ ಕಳೆದ 25 ವರ್ಷಗಳಿಂದ ಆಯೋಜಿಸುತ್ತಿರುವ ,ಪುಣೆಯಲ್ಲಿನ ಕನ್ನಡ ಕವಿಮನಸ್ಸುಗಳನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಕನ್ನಡ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ಚಂದ್ರಕಾಂತ ಹಾರಕುಡೆ ಅವರು ಶ್ರೀಯುತ ಡಾಕ್ಟರ್ ಶಶಿಕಾಂತ ಪಟ್ಟಣ ಅವರನ್ನು ಸಭಿಕರಿಗೆ ಪರಿಚಯಿಸಿದರು
ಅಧ್ಯಕ್ಷರಾದ ಶ್ರೀಯುತ ಡಾಕ್ಟರ್ ಶಶಿಕಾಂತ ಪಟ್ಟಣ ಅವರು ಮಾತನಾಡಿ , ಪುಣೆಯ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಭಾಗ 1978 ರಲ್ಲಿ ಪ್ರಾರಂಭ ವಾಗಿದ್ದು ಅದು ಕನ್ನಡ ಕ್ಕೆ ಪುಣೆಯಲ್ಲಿ ಇರುವ ಮಹತ್ವ ಎಂದು ಹೇಳಿ, ಪುಣೆ ಯ ಕನ್ನಡ ಸಂಘ ಕನ್ನಡ ಮನಸ್ಸುಗಳನ್ನು ಒಂದು ಗೂಡಿಸುವ ಕೆಲಸ ಅಭಿನಂದನಾರ್ಹ ಎಂದು ಹೇಳಿದರು. ಭಾಗವಹಿಸಿದ ಎಲ್ಲ ಕವಿಗಳ ಕವಿತೆಗಳನ್ನು ವಿಮರ್ಶಿಸುವ ಕೆಲಸವನ್ನು ಅದ್ಭುತವಾಗಿ ಮಾಡಿದರು
ಕನ್ನಡ ಶಾಲೆಯ ಮಕ್ಕಳು ಎಲ್ಲ ಕವಿಗಳ ಕಿರುಪರಿಚಯ ಮಾಡಿದರು.
ಎಲ್ಲ 18 ಕವಿಗಳು ಸ್ವರಚಿತ ಕವನಗಳನ್ನು ಪ್ರಸ್ತುತಪಡಿಸಿದರು.
ಶ್ರೀಮತಿ ಪೂಜಾ ಪಾಟೀಲ್ ನಿರೂಪಣೆ ಹಾಗೂ ಶ್ರೀಮತಿ ನೇತ್ರಾ ಕುಲಕರ್ಣಿ ವಂದನಾರ್ಪಣೆ ಮಾಡಿದರು.
ಕವಿಸಮ್ಮೇಳನದ ನಂತರ ಭೋಜನದ ವ್ಯವಸ್ಥೆ ಇದ್ದು ಎಲ್ಲರೂ ಆಸ್ವಾದಿಸಿದರು .

Archives